ಇತ್ತೀಚೆಗೆ ಬಲಿಪ ಪ್ರಸಾದರ ಮೇಳದ ದೇವಿ ಮಹಾತ್ಮೆ ಪ್ರಸಂಗ ನೋಡುವ ಸೌಭಾಗ್ಯ ನನ್ನದಾಗಿತ್ತು, ಪೆರುವಾಯಿ ನಾರಾಯಣ ಭಟ್ಟರ ಅತ್ಯಂತ ಅನುಭವಿ ಪರಂಪರೆಯ ಕ್ರಮದ ಚೆಂಡೆಯ ಝೇಂಕಾರ ಮತ್ತು ಪ್ರಸಾದ ಭಾಗವತರ ಪದಗಳು ಮಿಳಿತವಾದಾಗ ಮೈ ನವಿರೇಳುವ ರಸಸೃಷ್ಟಿಯಾಯಿತು ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ. ಹಳೇ ಕ್ರಮದ ಯಕ್ಷಗಾನದ ಪದಗಳನ್ನು ಹೆಚ್ಚು ಇಷ್ಟಪಡುವ ಕಾರಣದಿಂದಲೋ ಏನೋ ಬಲಿಪ ಪರಂಪರೆ ಅತ್ಯಂತ ಆಪ್ಯಾಯಮಾನವೆನಿಸುತ್ತದೆ.
ನನ್ನ ಸೌಂಡ್ ರೆಕಾರ್ಡರ್ ನಲ್ಲಿ ಆ ದಿನದ ಪ್ರದರ್ಶನದ ಪದ್ಯಗಳನ್ನು ದಾಖಲಿಸಿಕೊಂಡಿದ್ದೆ. ಆದರೆ, ಪ್ರದರ್ಶನವನ್ನು ನೇರವಾಗಿ ಆಸ್ವಾದಿಸಿದಾಗ ಸಿಗಬಹುದಾದ ಶಬ್ದ ಗುಣಮಟ್ಟ ಮತ್ತು ಹಿಮ್ಮೇಳದ ಝೇಂಕಾರವನ್ನು ಹಿಡಿಯುವುದಕ್ಕೆ ಖಂಡಿತವಾಗಿಯೂ ಈ ಸಾಧನದಿಂದ ಸಾಧ್ಯವಾಗದೇ ಹೋಯಿತು. ಪ್ರಸಾದ ಬಲಿಪರ ಮುಂದಿನ ಪ್ರದರ್ಶನವನ್ನು ಅತ್ಯುತ್ತಮವಾಗಿ ಧ್ವನಿಮುದ್ರಿಸಿಕೊಳ್ಳಬೇಕೆಂಬ ಉತ್ಸಾಹದಲ್ಲಿದ್ದೇನೆ.
ಬಲಿಪ ಪ್ರಸಾದರ ಪದಗಳನ್ನು ಕೇಳುವ ಆಸಕ್ತಿಯುಳ್ಳವರು ಈ ಕೆಳಗಿನ ಕೊಂಡಿಗಳನ್ನು ಗಮನಿಸಿ......