ಕೃತಜ್ಞತೆ: ಶಾಂತಾರಾಮ ಕುಡ್ವ ಮತ್ತು ಯಕ್ಷಸಂಗಮದ ಇತರ ಎಲ್ಲಾ ಸಹೃದಯಿ ಸದಸ್ಯರಿಗೆ.
ಯಕ್ಷಸಂಗಮ ಮೂಡಬಿದಿರೆ ಪೂರ್ಣ ರಾತ್ರಿಯ ತಾಳಮದ್ದಳೆ ಜುಲಾಯಿ ೨೩ ೨೦೧೬
ಪ್ರಸಂಗ೧: ಭರತಾಗಮನ ಪಾದುಕಾ ಪ್ರದಾನ
ಭಾಗವತಿಕೆ: ಪಟ್ಲ ಸತೀಶ್ ಶೆಟ್ಟಿ , ರವಿಚಂದ್ರ ಕನ್ನಡಿಕಟ್ಟೆ
ಮದ್ದಳೆ: ಕೃಷ್ಣಪ್ರಕಾಶ್ ಉಳಿತ್ತಾಯ
ಚೆಂಡೆ: ದೇವಾನಂದ ಭಟ್
ಶ್ರೀರಾಮ: ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು
ಭರತ: ಸುಣ್ಣಂಬಳ ವಿಶ್ವೇಶ್ವರ ಭಟ್ಟ
ವಸಿಷ್ಠ : ವಿದ್ವಾನ್ ವಿನಾಯಕ ಭಟ್ಟ್ ಗಾಳಿಮನೆ
ಲಕ್ಷ್ಮಣ: ಸುನೀಲ್ ಕುಮಾರ್ ಹೊಲಾಡು
Download/Listen Bharatagamana Yakshagana Talamaddale
ಪ್ರಸಂಗ ೨ : ರಾವಣ ವಧೆ
ಭಾಗವತಿಕೆ: ರವಿಚಂದ್ರ ಕನ್ನಡಿಕಟ್ಟೆ
ಚೆಂಡೆ-ಮದ್ದಳೆ: ಅಡೂರು ಗಣೇಶ್ ರಾವ್ , ಚೈತನ್ಯ ಕೃಷ್ಣ ಪದ್ಯಾಣ
ರಾವಣನಾಗಿ ವಿಟ್ಲ ಶಂಭು ಶರ್ಮ
ರಾವಣದೂತನಾಗಿ ಸೀತಾರಾಮ ಕುಮಾರ ಕಟೀಲು
ಶ್ರೀರಾಮ: ಪ್ರೊ| ಎಂ.ಎಲ್ . ಸಾಮಗರು
ಮಾತಲಿಯಾಗಿ ರಜನೀಶ ಹೊಳ್ಳರು
Download/Listen RavanaVadhe Yakshagana Talamaddale
ಪ್ರಸಂಗ ೩: ಶ್ರೀಕೃಷ್ಣ ಸಂಧಾನ
ಭಾಗವತಿಕೆ: ಪುತ್ತಿಗೆ ರಘುರಾಮ ಹೊಳ್ಳ
ಚೆಂಡೆ-ಮದ್ದಳೆ: ಪದ್ಯಾಣ ಶಂಕರನಾರಾಯಣ ಭಟ್, ಅಡೂರು ಗಣೇಶ್ ರಾವ್ , ಚೈತನ್ಯ ಕೃಷ್ಣ
ಕೌರವ: ಉಜಿರೆ ಅಶೋಕ್ ಭಟ್
ಶ್ರೀಕೃಷ್ಣನಾಗಿ ಡಾ.ಪ್ರಭಾಕರ ಜೋಷಿ
ವಿದುರ: ಗಣೇಶಶೆಟ್ಟಿ ಕನ್ನಡಿಕಟ್ಟೆ
Download/Listen Shreekrishna Sandhana Yakshagana Talamaddale
ಪ್ರಸಂಗ೪: ಜಾಬಾಲಿ-ನಂದಿನಿ
ಭಾಗವತಿಕೆ: ಪ್ರಸಾದ ಬಲಿಪ
ಪದ್ಯಾಣ ಶಂಕರನಾರಾಯಣ ಭಟ್
ಚೈತನ್ಯ ಪದ್ಯಾಣ
ಜಾಬಾಲಿಯಾಗಿ : ವಾಸುದೇವ ರಂಗಾಭಟ್
ನಂದಿನಿ: ಪೆರ್ಮುದೆ ಜಯಪ್ರಕಾಶ ಶೆಟ್ಟಿ
Download/Listen Jabali NandiniYakshagana Talamaddale
ಸಂಯೋಜನೆ: ಎಂ.ಶಾಂತರಾಮ ಕುಡ್ವ, ಯಕ್ಷಸಂಗಮ ಮೂಡಬಿದ್ರೆ
-----------------------------------
ಯಕ್ಷಸಂಗಮ ಮೂಡಬಿದಿರೆ ಇದರ 17ನೇ ವರ್ಷದ ಮಹೋನ್ನತ ತಾಳಮದ್ದಳೆ ಕೂಟ
23.7.2016 ರಂದು
ಸ್ಥಳ : ಮೂಡಬಿದಿರೆ ಸಮಾಜ ಮಂದಿರ
ಸಮಯ : ರಾತ್ರಿ 9 ರಿಂದ
ವಿಶಿಷ್ಟ ರೀತಿಯ ಸಂಯೋಜನೆಯಲ್ಲಿ
ಯುಗ್ಮ ಸಂವಾದ
ಪಾರ್ತಿಸುಬ್ಬ ವಿರಚಿತ
( ರಾಮ × ಭರತ ×ವಸಿಷ್ಟ × ಲಕ್ಷ್ಮಣ )
ಕಾಸರಗೋಡು ಸುಬ್ರಾಯ ಪಂಡಿತ ವಿರಚಿತ
( ರಾಮ × ರಾವಣ ×ಮಾತಲಿ × ರಾವಣ ದೂತ )
ದೇವೀದಾಸ ವಿರಚಿತ
( ಕೃಷ್ಣ × ಕೌರವ ×ವಿದುರ )
ಡಾ|| ಶಿಮಂತೂರು ನಾರಾಯಣ ಶೆಟ್ಟಿ ವಿರಚಿತ
( ಜಾಬಾಲಿ ×ನಂದಿನಿ )
ಹಿಮ್ಮೇಳದಲ್ಲಿ :
ಪುತ್ತಿಗೆರಘುರಾಮ ಹೊಳ್ಳ, ಪ್ರಸಾದ ಬಲಿಪ, ಪಟ್ಲ ಸತೀಶ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ
ಪದ್ಯಾಣ ಶಂಕರನಾರಾಯಣ ಭಟ್, ಚೈತನ್ಯ ಕೃಷ್ಣ ) ಕೃಷ್ಣ ಪ್ರಕಾಶ ಉಳಿತ್ತಾಯ, ದೇವಾನಂದ ಭಟ್ ಮಿಜಾರು
ಚಕ್ರತಾಳ : ರಾಜೇಂದ್ರ ಕೃಷ್ಣ
ಹದಿನಾಲ್ಕು ವರ್ಷ ವನವಾಸಿಯಾದ ರಾಮನಿಗೆ ತನ್ನ ತಮ್ಮನಾದ ಭರತ ರಾಮನಿರುವ ಕಾಡಿಗೆ ಬಂದು ಊರಿಗೆ ಮರಳುವಂತೆ ವಿಧವಿಧವಾಗಿ ಬೇಡಿಕೊಂಡಾಗ, ಸರ್ಮಥವಾದ ಕಾರಣವನ್ನು ಕೊಡುತ್ತಾ ನಾಡಿಗೆ ಬರಲೊಲ್ಲದೇ ಪಾದುಕೆಯನ್ನು ನೀಡಿ ಭರತನನ್ನು ಹರಸುವ
ಶ್ರೀರಾಮನಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು
ಮಾತೆಯ ಮಾತಿಗಿಂತ ಅಣ್ಣನ ಪ್ರೀತಿಯೇ ಹಿರಿದೆಂದು ಚಿತ್ರಿಸುತ್ತಾ, ಅಣ್ಣನನ್ನು ಮರಳಿ ಅಯೋಧ್ಯೆಗೆ ಕರೆತರಬೇಕೆಂದು ನಿಶ್ಚಯಿಸಿ ಬಗೆ ಬಗೆಯಿಂದ ರಾಮನ ಮನವೊಲಿಕೆಗೆ ಯತ್ನಿಸಿ, ಕೊನೆಗೆ ರಾಮನಿಲ್ಲದ ರಾಜ್ಯದಲ್ಲಿ ರಾಮನ ಆಳ್ವಿಕೆ ಬಯಸುವ ಜನರಿಗಾಗಿ್ ರಾಮನ ಪಾದುಕೆಯನ್ನೇ ಪಡೆದು ಬರುವ
ಭರತನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ
ಅಯೋಧ್ಯೆಯಲ್ಲಿ ಭರತನಿಲ್ಲದ ವೇಳೆಯಲ್ಲಿ ನಡೆದಿರಬಹುದಾದ ಘಟನೆಗೆ ಪ್ರತ್ಯಕ್ಷ ದರ್ಶಿಗಳಾಗಿಯೂ ಸಹ, ಸ್ಥಿತಪ್ರಜ್ಜರಾಗಿದ್ದು ತಮ್ಮ ಕರ್ತವ್ಯದಂತೆ ಭರತನನ್ನು ಕರೆಸಿ ಪಟ್ಟವೇರುವಂತೆ ಹೇಳಿ, ಹಾಗೂ ವಿಷಯವರಿತ ಭರತ ಕೋಪಗೊಂಡಾಗ ಅವನಿಗೆ ತಿಳಿಯಾಗಿ ಧರ್ಮಸೂಕ್ಷ್ಮದ ಬಗ್ಗೆ ತಿಳಿಸುವ
ಗುರು ವಸಿಷ್ಠರಾಗಿ ವಿದ್ವಾನ್ ವಿನಾಯಕ ಭಟ್ಟ್ ಗಾಳಿಮನೆ
ಅಣ್ಣನ ಪಡಿನೆರಳಾಗಿ , ಶ್ರೀರಾಮನ ಸೇವೆ ಮಾಡಲು ವನವಾಸ ದೀಕ್ಷೆಯನ್ನು ಸ್ವ ಇಚ್ಛೆಯಿಂದ ಕೈಗೊಂಡು , ಸೇನಾಸಹಿತನಾಗಿ , ಶ್ರೀರಾಮನನ್ನು ಅಯೋಧ್ಯೆಗೆ ಕರೆತರಲು ಬರುತ್ತಿರುವ ಭರತನನ್ನು ಕಂಡು ಪನ್ನಗನಂತೆ ಭುಸುಗುಡುವ , ಸುಮ್ಮನಿರು ತಮ್ಮ ಎಂದು ಶ್ರೀರಾಮನ ನುಡಿಗೆ ಸುಮ್ಮನಾಗುವ
ಭಾತೃಪ್ರೇಮಿ ಲಕ್ಷ್ಮಣನಾಗಿ ಸುನೀಲ್ ಕುಮಾರ್ ಹೊಲಾಡು
ರಾಮನ ಹೆಂಡತಿಯನ್ನು ಕದ್ದು ತಂದು ಅಶೋಕವನದಲ್ಲಿ ಇರಿಸಿ, ರಾಮನೊಂದಿಗೆ ಯುದ್ದದೊಂದಿಗೆ ಸರ್ವವನ್ನು ಕಳೆದಕೊಂಡು ಅಂತಿಮ ಯುದ್ದದಲ್ಲಿ ತನ್ನ ಅಂತರಂಗದ ನಿಲುವೇನು ಎಂಬುವುದನ್ನು ಚಿತ್ರಿಸುವ , ಪುಂಡರೀಕಾಂಬಕನ ಕಾಣುವ
ರಾವಣನಾಗಿ ವಿಟ್ಲ ಶಂಭು ಶರ್ಮ
ಗೂಢ ಬ್ರಹ್ಮನಲಿ ಹಗೆ ಮಾಡಿ ಕೆಡದಿರು ಎಂಬಿತ್ಯಾದಿ ಪದ್ಯಗಳಿಗೆ ರಾವಣನ ಮುಂದೆ ರಾವಣ ದೂತನಾಗಿ, ಪ್ರೇಕ್ಷಕರಿಗೂ ಹಾಸ್ಯರಸದ ಅನುಭವ ನೀಡುತ್ತಾ, ನಗುವಿನ ಕಚಗುಳಿ ಇಡುವ
ರಾವಣದೂತನಾಗಿ ಸೀತಾರಾಮ ಕುಮಾರ ಕಟೀಲು
ರಾವಣನನ್ನು ನಿಗ್ರಹಿಸುವ ರಾಮನಾಗಿ ಆತ್ಮಾನಂ ಮಾನುಷಂ ಮನ್ಯೆ ಎಂಬ ತನ್ನ ನಿಲುವಿಗೂ ಹಾಗೂ ರಾವಣನ ವರಕ್ಕೂ ಭಂಗಬಾರದಂತೆ ನಡೆ, ನುಡಿಯಿಂದ ನಡೆದುಕೊಂಡು, ಸತಿಗಾಗಿ , ಸೂರ್ಯವಂಶದ ಸುತನಾಗಿ ಸರ್ಮಥಿಸಿಕೊಳ್ಳುತ್ತಾ ಕೋದಂಡರಾಮನಾಗಿ ಕಾಣಿಸಿಕೊಳ್ಳವವರು
ಪ್ರೊ| ಎಂ.ಎಲ್ . ಸಾಮಗರು
ದೇವಲೋಕದ ಸುರೇಂದ್ರನ ರಥದೊಂದಿಗೆ ಬಂದು ರಾಮರಾವಣರ ಯುದ್ದದಲ್ಲಿ ರಾಮನಿಗೆ ಸಹಾಯಕನಾಗುತ್ತಾ, ದೇವತೆಗಳು ಕೂಡ ಯುದ್ದಕ್ಕೆ ಸಹಾಯಕರಾಗಬೇಕಾಗಿರುವುದಕ್ಕೆ ಸರ್ಮಥವಾದ ಕಾರಣವನ್ನು ಕೊಡುತ್ತಾ ರಾಮನಿಗೆ ಸಾರಥಿಯಾಗುವ
ಮಾತಲಿಯಾಗಿ ರಜನೀಶ ಹೊಳ್ಳ
ಸಮರ ಬಯಸುವ ಕೌರವ, ಸಂಧಾನ ಬಯಸುವ ಧರ್ಮಜನ ನಡುವೆ ರಾಯಭಾರಿಯಾಗಿ ಕೌರವನ ಸಭೆಗೆ ಪಾಂಡವರ ಪಾಲಿನ ರಾಜ್ಯ ಕೇಳಲು ಬರುವ ಪಾಲ್ಗಡಲೊಡೆಯನಾದ
ಶ್ರೀಕೃಷ್ಣನಾಗಿ ಡಾ.ಪ್ರಭಾಕರ ಜೋಷಿ
ಭಕ್ತರ ನಿಜ ಭಕ್ತಿಗೆ ದೇವರು ಅತಿಥಿಯಾಗುವನು ಎಂಬ ಸತ್ಯವನ್ನು ತೋರಿಸಿಕೊಟ್ಟು ಧರೆಗಿಳಿದ ದೇವರು ಆದರ್ಶಕ್ಕೆ ಮಾತ್ರವಲ್ಲ ಅನುಕರಣೆಗೂ ಅವನ ಹಾದಿಯೇ ಸರಿಯೆಂಬುದನ್ನು ಸಭೆಯಲ್ಲಿ ಸಾರುವುದಕ್ಕೆ ಬೇಕಾಗಿ ಬಿಲ್ಲು ಮುರಿಯುವ
ವಿದುರನಾಗಿ ಗಣೇಶಶೆಟ್ಟಿ ಕನ್ನಡಿಕಟ್ಟೆ
ನೆಲಕ್ಕಾಗಿ ಕೂಗಾಡಿದ ಕೌರವನ ಹೋರಾಟ ಛಲಕ್ಕಾಗಿ ಎಂಬುದನ್ನು ಸಾಧಿಸುತ್ತಾ, ಪಾಂಡವರು ಹಗೆಗಳಲ್ಲ ಎಂದು ಕೃಷ್ಣನನ್ನೇ ವಿರೋಧಿಸಿ, ವಿರೋಧದಿಂದಲೇ ಮುಕ್ತಿಯನ್ನು ಪಡೆದ ರಾವಣ, ಕಂಸಾದಿಗಳ ಸಾಲಿನಲ್ಲಿ ಮೆರೆಯ ಬಯಸುವ ಅದಕ್ಕಾಗಿ ಪಾಂಡವರೊಡನೆ ಸಮಯ ಬಯಸುವ
ಛಲದಂಕ ಮಲ್ಲ ಕೌರವನಾಗಿ ಉಜಿರೆ ಅಶೋಕ್ ಭಟ್
ಕ್ಷಾಮದಲ್ಲಿ ಬಳಲುತ್ತಿರುವ ಭೂಮಿಯ ಜನರ ಉದ್ದಾರಕ್ಕೆ ಬೇಕಾಗಿ ಸುರಲೋಕದ ಕಾಮಧೇನುವನ್ನು ಭೂಲೋಕಕ್ಕೆ ತರುವ ವಾಂಛೆಯಿಂದ ಸುರೇಂದ್ರನಲ್ಲಿಗೆ ಹೋಗಿ ಕಾಮಧೇನುವಿನ ಅನುಪಸ್ಥಿತಿಯಲ್ಲಿ ಅವಳ ಮಗಳಾದ ನಂದಿನಿಯನ್ನು ಭೂಲೋಕಕ್ಕೆ ಕರೆತರಲು ಬಗೆ ಬಗೆಯಿಂದ ಪ್ರಾರ್ಥಿಸಿ, ಭೂಲೋಕದ ಬಗೆಗಾಗಿ ನಂದಿನಿಗಿರುವ ಅಭಿಪ್ರಾಯವನ್ನು ತೊಡೆದು ಹಾಕಲು ಪ್ರಯತ್ನಿಸಿ, "ನಂದಿನಿಯನ್ನು ಕರೆತರಲು ಹೋಗಿ, ನಂದಿನಿಯನ್ನೇ ಧರೆಗಿಳಿಸಿದ"
ಮುನಿ ಜಾಬಾಲಿಯಾಗಿ ವಾಸುದೇವ ರಂಗಾ ಭಟ್
ಜಾಬಾಲಿಮುನಿಯ ಕೋರಿಕೆಯಂತೆ ಧರೆಯ ಬರಗಾಲದ ನಿವಾರಣೆಗೆ ಬೇಕಾಗಿ ಸುರೇಂದ್ರನೇ ಕಾಮಧೇನುವಿನ ಪುತ್ರಿಯನ್ನು ಮೆಚ್ಚಿಸಿಕರೆದೊಯ್ಯುವಂತೆ ಹೇಳಿದಾಗ, ಮುನಿಯ ಭಕ್ತಿಗೆ ಮೆಚ್ಚಿ ಮುನಿಯೊಂದಿಗೆ ಮಾತಿಗಿಳಿದರು ಧರೆಯ ಜನರ ಬಗ್ಗೆ ಆಕ್ಷೇಪವನ್ನಾಡಿ, ಮುನಿಯ ಶಾಪದಿಂದ ಧರೆಗಿಳಿದು ಜನರನುದ್ದರಿಸುವ
ಸುರ ಲೋಕದ ಧೇನು ನಂದಿನಿಯಾಗಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ
ಯಕ್ಷಗಾನದ ಸುಪ್ರಸಿಧ್ದ ಅರ್ಥಧಾರಿ , ಫ್ರೊ.ಎಂ.ಎಲ್.ಸಾಮಗ
ಇವರಿಗೆ ಸಂಮಾನ
ಅಭಿನಂದನೆ: ಡಾ.ಪ್ರಭಾಕರ ಜೋಷಿ ಯವರಿಂದ
ಹಿಮ್ಮೇಳದವರಿಂದ ದ್ವಂದ್ವ , ಉತ್ತಮ ರಾಗತಾಳ ಸಂಯೋಜನೆ
ಎಂ.ಶಾಂತರಾಮ ಕುಡ್ವ
ಮೂಡಬಿದಿರೆ