ಧ್ವನಿ ಶೋಧನೆ:

Wednesday, November 30, 2016

ಯಕ್ಷಧ್ವನಿ ಆಂಡ್ರಾಯ್ಡ್ ಮೊಬೈಲ್ ತಂತ್ರಾಂಶ


ಯಕ್ಷಗಾನ ಕಲಾಭಿಮಾನಿಗಳೇ,
http://yakshadhwani.blogspot.in ಈ ಬ್ಲಾಗ್ ನಲ್ಲಿ ಈವರೆಗೆ ಹಂಚಲಾದ ಮತ್ತು ಇನ್ನು ಸೇರಿಸಲಾಗುವ ಯಕ್ಷಗಾನ ತಾಳಮದ್ದಳೆಗಳ, ಪದಸಂಕಲನಗಳ, ದ್ವಂದ್ವ, ಗಾನವೈಭವ, ಭಾಷಣ ಮತ್ತು ಇತರ ದಾಖಲಾತಿಗಳ ಧ್ವನಿಮುದ್ರಣಗಳನ್ನು ಮೊಬೈಲ್ ನ ಮೂಲಕವೂ ಸುಲಭವಾಗಿ ಪಡೆಯುವುದಕ್ಕೆ ಉಪಯುಕ್ತವಾಗುವಂತೆ ಯಕ್ಷಧ್ವನಿ ಆಂಡ್ರಾಯ್ಡ್ ಮೊಬೈಲ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈಗ ಇದರ ಬೀಟಾ ಆವೃತ್ತಿ ಆಂಡ್ರಾಯ್ಡ್ ಪ್ಲೇಸ್ಟೋರ್ ನಲ್ಲಿ ಲಭ್ಯವಿದೆ.

ತಂತ್ರಾಂಶದ ವಿವರಗಳನ್ನು ಮತ್ತು ಉಪಯೋಗಿಸುವ ಕ್ರಮವನ್ನು ತಿಳಿದುಕೊಳ್ಳುವುದಕ್ಕಾಗಿ ಈ ವೀಡಿಯೋವನ್ನು ನೋಡಿ
https://www.youtube.com/watch?v=d9r-qwTlMw8

ತಂತ್ರಾಂಶವನ್ನು ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಅನುಸ್ಥಾಪಿಸುವುದಕ್ಕಾಗಿ ಈ ಕೊಂಡಿಯನ್ನು ಉಪಯೋಗಿಸಿ
https://play.google.com/store/search?q=yakshadhwani

ನಿಮ್ಮ ಅಮೂಲ್ಯವಾದ ಸಲಹೆ, ಸೂಚನೆಗಳಿಗೆ ಸ್ವಾಗತವಿದೆ, ಮಾಹಿತಿಗಳಿಗಾಗಿ ಸಂಪರ್ಕಿಸಿ

ಧನ್ಯವಾದಗಳೊಂದಿಗೆ
ಲನಾಭಟ್
9743289373

No comments:

Post a Comment